ಕುಂದಾಪುರದ ಸಂಪ್ರದಾಯಗಳ ತಿಳಿಸುವ ಕಲಾತ್ಮಕ ಕಿರುಚಿತ್ರ ''ಕ್ಯಾನಿಮುಡಿ''


    ನಮ್ಮ ಕರಾವಳಿ ಕುಂದಾಪುರ ಭಾಗದಲ್ಲಿ ಅನೇಕ ಸಂಪ್ರದಾಯ ರೀತಿ ರಿವಾಜುಗಳು ಅತೀ ಪುರಾತನವಾಗಿದೆ.    ನಮ್ಮ ಸಂಪ್ರದಾಯ ರೀತಿ ರಿವಾಜುಗಳು ಮಾನವನ ಆರೋಗ್ಯ ಏಕಾಗ್ರತೆ ಒಗ್ಗಟ್ಟಿನ ಸಾಂಕೇತವಾಗಿತ್ತು. ಎಲ್ಲರೂ ಕೂಡ ಕುಟುಂಬ ವಾಸಿಗಳಾಗಿದ್ದು   ಕಾಲಕ್ರಮೇಣ ಅಭಿವೃದ್ಧಿಯ   ನೆಪವೋ,  ಅಸಡ್ಡೆಯ ಪರಮಾದದಿಯೋ ತಿಳಿಯುತ್ತಿಲ್ಲ ನಮ್ಮ ಹಿರಿಯ ಅಜ್ಜ ಮುತ್ತಜ್ಜ ಕಾಲದ ರಿವಾಜು ಸಂಪ್ರದಾಯಗಳೆಲ್ಲ ಹಿರಿಯರು ಅಳಿದಂತೆ ಅವರ ಹಿಂದೆ ಸಂಪ್ರದಾಯವು ಅಳಿವಿನಂಚಿನತ್ತ ಸೇರುತ್ತಿದೆ. ಅಂತಹ ಸಂಪ್ರದಾಯಗಳನ್ನು ಈವಾಗಿನ ಪೀಳಿಗೆಗೆ ಹಾಗೂ ಮುಂದಿನ ಪೀಳಿಗೆಗೆ ಅದರ ಮಹತ್ವ ತಿಳಿಸುವ ಉದ್ದೇಶದಿಂದ ತಯಾರುಗೊಂಡ ಸಿನಿಮಾದೇ "ಕ್ಯಾನಿಮುಡಿ".
ನಮ್ಮ ಕರಾವಳಿ ಭಾಗದಲ್ಲಿ ಕರ್ಕಾಟಿ ಅಮಾನೆಯ ದಿನದಂದು ಮಾಡುವಂತ ಒಂದು ಸಂಪ್ರದಾಯವನ್ನು ಎಳೆ ಎಳೆಯಾಗಿ ಒಂದು ಕಥೆಯ ಹಂದರದೊಂದಿಗೆ ತೋರಿಸುತ್ತಾ ಹೋರಿಗೆ ಎರೆತ ಕೊಡುವಂತದ್ದು, ಕ್ಯಾನಿ ಗೆಂಡ ಹಿಟ್ಟು ಮಾಡಿ ಪೂಜೆ ಮಾಡುವುದು, ಅದರ ತಯಾರಿಯ ಜೊತೆಗೆ ಅದರ ಮಹತ್ವವನ್ನು ತಿಳಿಸುವ ಪ್ರಯತ್ನವಾಗಿದೆ.

ಇದರ ಪೋಸ್ಟರ್ ಅನ್ನು ಶ್ರೀಯುತ ಪ್ರಮೋದ್ ಶೆಟ್ಟಿ ಖ್ಯಾತ ಚಲನಚಿತ್ರ ನಟರು ಬಿಡುಗಡೆಗೊಳಿಸಿದ್ದರು.

ಲಿರಿಕಲ್ ವಿಡಿಯೋ ಅನ್ನು ದಿಯಾ ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ್ ಬಿಡುಗಡೆಗೊಳಿಸಿದ್ದರು.

ಈ ಸಿನಿಮಾವನ್ನು ನಮ್ಮ ಊರಿನ ಹೆಮ್ಮೆ ಹಿನ್ನೆಲೆ ಸಂಗೀತದ ಮಾಂತ್ರಿಕ ಎಂದೇ ಬಿರುದಾಂಕಿತರಾದ ಶ್ರೀಯುತ ರವಿ ಬಸ್ರೂರು ಅವರು ಬಿಡುಗಡೆಗೊಳಿಸಿದ್ದರು.

ಜಿಕೆ ಸ್ಟುಡಿಯೋ ಅಂಡ್ ಫಿಲಂಸ್ ಎನ್ನುವ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.
ಬಿಡುಗಡೆಯಾಗಿ ಇಂದಿಗೆ 50 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.  ಎಂದು ‘ಕ್ಯಾನಿಮುಡಿ’ ಕಿರುಚಿತ್ರದ ನಿರ್ದೇಶಕ ಗುರು ಕುಂದಾಪುರ ಹೇಳಿದರು 
 ಜರ್ನಿ, ಕರ್ಕಾಟೆ ಆಮಾಸಿ, ಕ್ಯಾನಿಮುಡಿ ಇವು ಗುರು ಕುಂದಾಪುರ ನಿರ್ದೇಶನದ ಕಿರು ಚಿತ್ರಗಳು.

ಕ್ಯಾನಿಮುಡಿ’  ಚಿತ್ರೀಕರಣ ಕುಂದಾಪುರ ಉಪ್ಪುಂದ ಭಾಗದಲ್ಲಿ ನಡೆದಿದ್ದು

 ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಉದಯ ಹಾಲಂಬಿ (ಕಾಂತಾರ) / ಪ್ರತಿಮಾ ನಾಯಕ್ ( ಕಾಂತಾರ) / ಜ್ಯೋತಿ ಕೊಡ್ಲಾಡಿ / ನಾಗರಾಜ್ ವಿಠಲವಾಡಿ / ಗುರು ಕುಂದಾಪುರ/ ಗಜ್ಜೆಕು ನಾಗರಾಜ್ / ಶಿಲ್ಪ ಕುಮಟ ಸಿಂಚನ ಕೋಡಿ ನಟಿಸಿದ್ದಾರೆ.

ತಾಂತ್ರಿಕ ವರ್ಗದಲ್ಲಿ

ಚಿತ್ರಕಥೆ ನಿರ್ದೇಶನ:- ಗುರುಕುಂದಾಪುರ

ಛಾಯಾಗ್ರಹಣ-ಸಂಕಲನ :- ಶಂಕರನಾರಾಯಣ ಪೆರ್ಡೂರು / ಕಥೆ ಸಂಭಾಷಣೆ:- ನಾಗರಾಜ್ ವಿರಲವಾಡಿ

ಸಂಗೀತ: ಯತಿರಾಜ್ ಉಳ್ಳೂರು / ಕಲರಿಂಗ್ : ರಾಹುಲ್ ವಸಿಷ್ಠ / ಮೇಕಪ್: ರೇಖಾ ಕುಂದಾಪುರ

ಕಲೆ :- ರಾಜೇಶ್ ಕೆರ್ಗಾಲ್, ಸುಬ್ರಹ್ಮಣ್ / ಬೆಳಕು :- ವಿಶು ಸಿದ್ದಾಪುರ, ಅಜಿತ್ ಯಾದವ್

ಡೋನ್ :- ವಿನಯ ಉಳ್ಳೂರು / ಸಬ್ ಟೈಟಲ್:- ಕ್ಲಿಂಗ್ ಜಾನ್ಸನ್

ಸಹಾಯಕ ಛಾಯಾಗ್ರಹಣ :- ಶಿವು ಗೋಡೆ / ಪ್ರೊಡಕ್ಷನ್ ಮ್ಯಾನೇಜರ್: ಗಜ್ಜೆಕು ನಾಗರಾಜ್

ವಿನ್ಯಾಸ:- ವಿಜಿತ್ ಮಲ್ಯಾಡಿ, ಅಭಿಷೇಕ್ ಎನ್ ಚಂದನ್ / ಮೇಕಿಂಗ್ : ನವೀನ್ ಕುಮಾರ್ ಎ

Comments

Popular posts from this blog

ಜನ್ಸಾಲೆ ನಾಗಮಂಡಲೋತ್ಸವಕ್ಕೆ ಚಪ್ಪರ ಮುಹೂರ್ತ

ಸಿದ್ದಾಪುರದಲ್ಲಿ ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರ