ಜನ್ಸಾಲೆ ನಾಗಮಂಡಲೋತ್ಸವಕ್ಕೆ ಚಪ್ಪರ ಮುಹೂರ್ತ
#ಟೈಮ್ಸ್ ಕುಂದಾಪ್ರ
ಜನ್ಸಾಲೆ ನಾಗಮಂಡಲೋತ್ಸವಕ್ಕೆ ಚಪ್ಪರ ಮುಹೂರ್ತ
ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಜನ್ಸಾಲೆಯ ಶಕ್ತಿ ಸ್ಥಳವಾದ ಶ್ರೀ ಸರ್ವಾರ್ಥ ಸಾಧಿಕೆ ಅಮ್ಮನವರನ್ನು ನಂಬಿರುವ ಕುಟುಂಬಸ್ಥರಿಂದ ನಾಗ ದೇವರ ಸನ್ನಿಧಿಯಲ್ಲಿ ಫೆಬ್ರವರಿ 04 ಮಂಗಳವಾರ 2025 ರಂದು ನಡೆಯುವ ಚತುಃ ಪವಿತ್ರ ನಾಗಮಂಡಲೋತ್ಸವ ಹರಕೆ ಸೇವೆಯ ಸಿದ್ಧತೆಯು ಬಹಳ ಅದ್ಧೂರಿಯಿಂದ ಚುರುಕಾಗಿ ಸಾಗಿ ಬರುತ್ತಿದೆ.
ಈ ಧಾರ್ಮಿಕ ಕಾರ್ಯಕ್ರಮದ ಪ್ರಾರಂಭಿಕ ಹಂತದ ಚಪ್ಪರ ಮುಹೂರ್ತವು ಇಂದು ಆಡಳಿತ ಮುಖ್ಯಸ್ಥರಾದ ಲಕ್ಷ್ಮಣ ಕುಲಾಲ್ ಜೊತೆಗೆ ಸಂಪಿಗೇಡಿ ಸಂಜೀವ ಶೆಟ್ಟಿ, ಜಯರಾಮ್ ಭಂಡಾರಿ ಅಕ್ಕುಂಜೆ, ಮಹಾಬಲ ಶೆಟ್ಟಿ ಹಂಚಿನಂಗಡಿ, ಮಧುಸೂಧನ್ ಕಾಮತ್ ಹಂಚಿನಂಗಡಿ ಹಾಗು ಸರ್ವ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಸಂಪ್ರದಾಯ ಬದ್ದವಾಗಿ ನೆರವೇರಿಸಲಾಗಿದೆ.
Comments
Post a Comment