ನಮ್ಮ ಕರಾವಳಿ ಕುಂದಾಪುರ ಭಾಗದಲ್ಲಿ ಅನೇಕ ಸಂಪ್ರದಾಯ ರೀತಿ ರಿವಾಜುಗಳು ಅತೀ ಪುರಾತನವಾಗಿದೆ. ನಮ್ಮ ಸಂಪ್ರದಾಯ ರೀತಿ ರಿವಾಜುಗಳು ಮಾನವನ ಆರೋಗ್ಯ ಏಕಾಗ್ರತೆ ಒಗ್ಗಟ್ಟಿನ ಸಾಂಕೇತವಾಗಿತ್ತು. ಎಲ್ಲರೂ ಕೂಡ ಕುಟುಂಬ ವಾಸಿಗಳಾಗಿದ್ದು ಕಾಲಕ್ರಮೇಣ ಅಭಿವೃದ್ಧಿಯ ನೆಪವೋ, ಅಸಡ್ಡೆಯ ಪರಮಾದದಿಯೋ ತಿಳಿಯುತ್ತಿಲ್ಲ ನಮ್ಮ ಹಿರಿಯ ಅಜ್ಜ ಮುತ್ತಜ್ಜ ಕಾಲದ ರಿವಾಜು ಸಂಪ್ರದಾಯಗಳೆಲ್ಲ ಹಿರಿಯರು ಅಳಿದಂತೆ ಅವರ ಹಿಂದೆ ಸಂಪ್ರದಾಯವು ಅಳಿವಿನಂಚಿನತ್ತ ಸೇರುತ್ತಿದೆ. ಅಂತಹ ಸಂಪ್ರದಾಯಗಳನ್ನು ಈವಾಗಿನ ಪೀಳಿಗೆಗೆ ಹಾಗೂ ಮುಂದಿನ ಪೀಳಿಗೆಗೆ ಅದರ ಮಹತ್ವ ತಿಳಿಸುವ ಉದ್ದೇಶದಿಂದ ತಯಾರುಗೊಂಡ ಸಿನಿಮಾದೇ "ಕ್ಯಾನಿಮುಡಿ". ನಮ್ಮ ಕರಾವಳಿ ಭಾಗದಲ್ಲಿ ಕರ್ಕಾಟಿ ಅಮಾನೆಯ ದಿನದಂದು ಮಾಡುವಂತ ಒಂದು ಸಂಪ್ರದಾಯವನ್ನು ಎಳೆ ಎಳೆಯಾಗಿ ಒಂದು ಕಥೆಯ ಹಂದರದೊಂದಿಗೆ ತೋರಿಸುತ್ತಾ ಹೋರಿಗೆ ಎರೆತ ಕೊಡುವಂತದ್ದು, ಕ್ಯಾನಿ ಗೆಂಡ ಹಿಟ್ಟು ಮಾಡಿ ಪೂಜೆ ಮಾಡುವುದು, ಅದರ ತಯಾರಿಯ ಜೊತೆಗೆ ಅದರ ಮಹತ್ವವನ್ನು ತಿಳಿಸುವ ಪ್ರಯತ್ನವಾಗಿದೆ. ಇದರ ಪೋಸ್ಟರ್ ಅನ್ನು ಶ್ರೀಯುತ ಪ್ರಮೋದ್ ಶೆಟ್ಟಿ ಖ್ಯಾತ ಚಲನಚಿತ್ರ ನಟರು ಬಿಡುಗಡೆಗೊಳಿಸಿದ್ದರು. ಲಿರಿಕಲ್ ವಿಡಿಯೋ ಅನ್ನು ದಿಯಾ ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ್ ಬಿಡುಗಡೆಗೊಳಿಸಿದ್ದರು. ಈ ಸಿನಿಮಾವನ್ನು ನಮ್ಮ ಊರಿನ ಹೆಮ್ಮೆ ಹಿನ್ನೆಲೆ ಸಂಗೀತದ ಮಾಂತ್ರಿಕ ಎಂದೇ ...
#ಟೈಮ್ಸ್ ಕುಂದಾಪ್ರ ಜನ್ಸಾಲೆ ನಾಗಮಂಡಲೋತ್ಸವಕ್ಕೆ ಚಪ್ಪರ ಮುಹೂರ್ತ ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಜನ್ಸಾಲೆಯ ಶಕ್ತಿ ಸ್ಥಳವಾದ ಶ್ರೀ ಸರ್ವಾರ್ಥ ಸಾಧಿಕೆ ಅಮ್ಮನವರನ್ನು ನಂಬಿರುವ ಕುಟುಂಬಸ್ಥರಿಂದ ನಾಗ ದೇವರ ಸನ್ನಿಧಿಯಲ್ಲಿ ಫೆಬ್ರವರಿ 04 ಮಂಗಳವಾರ 2025 ರಂದು ನಡೆಯುವ ಚತುಃ ಪವಿತ್ರ ನಾಗಮಂಡಲೋತ್ಸವ ಹರಕೆ ಸೇವೆಯ ಸಿದ್ಧತೆಯು ಬಹಳ ಅದ್ಧೂರಿಯಿಂದ ಚುರುಕಾಗಿ ಸಾಗಿ ಬರುತ್ತಿದೆ. ಈ ಧಾರ್ಮಿಕ ಕಾರ್ಯಕ್ರಮದ ಪ್ರಾರಂಭಿಕ ಹಂತದ ಚಪ್ಪರ ಮುಹೂರ್ತವು ಇಂದು ಆಡಳಿತ ಮುಖ್ಯಸ್ಥರಾದ ಲಕ್ಷ್ಮಣ ಕುಲಾಲ್ ಜೊತೆಗೆ ಸಂಪಿಗೇಡಿ ಸಂಜೀವ ಶೆಟ್ಟಿ, ಜಯರಾಮ್ ಭಂಡಾರಿ ಅಕ್ಕುಂಜೆ, ಮಹಾಬಲ ಶೆಟ್ಟಿ ಹಂಚಿನಂಗಡಿ, ಮಧುಸೂಧನ್ ಕಾಮತ್ ಹಂಚಿನಂಗಡಿ ಹಾಗು ಸರ್ವ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಸಂಪ್ರದಾಯ ಬದ್ದವಾಗಿ ನೆರವೇರಿಸಲಾಗಿದೆ. ವರದಿ : ಗಣೇಶ್ ಶೆಟ್ಟಿ ಸಿದ್ದಾಪುರ
ಟೈಮ್ಸ್ ಕುಂದಾಪ್ರ :- ಗ್ರಾಮ ವಿಕಾಸ ಸಮಿತಿ ಸಿದ್ದಾಪುರ, ಇವರ ನೇತೃತ್ವದಲ್ಲಿ ರಕ್ತನಿಧಿ ವಿಭಾಗ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಮತ್ತು ಜಿಲ್ಲಾಡಳಿತ, ಉಡುಪಿ ಜಿಲ್ಲೆ ಲಯನ್ಸ್ ಕ್ಲಬ್, ತಲ್ಲೂರು, ಇವರ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ.) ಅಮಾಸೆಬೈಲು ವಲಯ ಕುಂದಾಪುರ-2, ಶ್ರೀ ಬ್ರಾಹ್ಮೀ ಸರ್ಕಲ್ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ, ಸಿದ್ದಾಪುರ ಆರಾಧ್ಯ ಗೆಳೆಯರ ಬಳಗ, ಸಿದ್ದಾಪುರ ಹಿಂದೂ ಜಾಗರಣ ವೇದಿಕೆ, ಸಿದ್ದಾಪುರ ವಲಯ ಗೂಡ್ಸ್ ಬಾಡಿಗೆ ವಾಹನ ಚಾಲಕರ ಮತ್ತು ಮಾಲಕರ ಸಂಘ, ಸಿದ್ದಾಪುರ ಟೂರಿಸ್ಟ್ ವಾಹನ ಚಾಲಕರ ಮತ್ತು ಮಾಲಕರ ಸಂಘ, ಸಿದ್ದಾಪುರ ಇವರ ಸಹಯೋಗದೊಂದಿಗೆ ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರ ದಿನಾಂಕ : 29-09-2024ನೇ ಆದಿತ್ಯವಾರ, ಸಮಯ ಬೆಳಿಗ್ಗೆ 8.30 ರಿಂದ 2.30 ಗಂಟೆಯವರೆಗೆ ಸ್ಥಳ ಶ್ರೀ ರಂಗನಾಥ ಸಭಾಭವನ, ಹಾಲಾಡಿ ರಸ್ತೆ ಸಿದ್ದಾಪುರ ಸರ್ವರಿಗೂ ಆದರದ ಸ್ವಾಗತ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ಸರ್ವಸದಸ್ಯರು ಲಯನ್ಸ್ ಕ್ಲಬ್, ತಲ್ಲೂರು ಸಂಯೋಜಕರು, ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಗ್ರಾಮ ವಿಕಾಸ ಸಮಿತಿ, ಸಿದ್ದಾಪುರಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರ
Comments
Post a Comment