ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಡುಪಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ

2024-25ನೇ ಶೈಕ್ಷಣಿಕ ವರ್ಷದ ಪದವಿ ಪೂರ್ವ ವಿಭಾಗದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ವು ಇದೇ ಬರುವ ಸೆಪ್ಟೆಂಬರ್ 23 ಸೋಮವಾರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
ಜಿಲ್ಲೆಯ ಬಾಲಕ ಮತ್ತು ಬಾಲಕಿಯರ ವಿಭಾಗದ ಒಟ್ಟು 14 ತಂಡಗಳು ಭಾಗವಹಿಸಲಿದ್ದು, 
ಕುಂದಾಪುರದ ಹೃದಯಭಾಗದಲ್ಲಿರುವ ಅತೀ ಪುರಾತನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಸಂಸ್ಥೆಯ ಪ್ರಾಂಶುಪಾಲ ರಾಮಕೃಷ್ಣ  ಬಿ.ಜಿ ತಿಳಿಸಿದ್ದಾರೆ.

ಸಂಸ್ಥೆಯ ಹಳೆ ವಿದ್ಯಾರ್ಥಿ ಸಂಘ ಮತ್ತು ಶಾಲಾಭಿವೃದ್ಧಿ ಸಮಿತಿಯವರ ಸಹಕಾರದೊಂದಿಗೆ ಸಂಪೂರ್ಣ ಮ್ಯಾಟ್ ಅಳವಡಿಕೆಯೊಂದಿಗೆ ಯಾವುದೇ ಖಾಸಗಿ ಪಂದ್ಯಾಟಕ್ಕೆ ಕಡಿಮೆಯಿಲ್ಲ ಎನ್ನುವಂತೆ ಸಜ್ಜುಗೊಳಿಸಲಾಗುತ್ತಿದೆ.

ಸಂಸ್ಥೆಯ ಕ್ರೀಡಾ ಸಂಚಾಲಕರಾದ ಉದಯ್ ಶೆಟ್ಟಿ ಕಾಳಾವರ ಮತ್ತು ಪೂರ್ಣಿಮಾ ನಾಯಕ್ ಅವರ ಮಾರ್ಗದರ್ಶನದೊಂದಿಗೆ ಅದ್ದೂರಿಯ ಪಂದ್ಯಾಟಕ್ಕೆ ಸಜ್ಜಾಗುತ್ತಿದೆ.
ಬೆಳಿಗ್ಗೆ 9 ಗಂಟೆಗೆ ಪಂದ್ಯಾಟಗಳು ಪ್ರರಂಭಗೊಳ್ಳುವ ನಿರೀಕ್ಷೆಯಿದೆ.
ಬಾಲಕ ಮತ್ತು ಬಾಲಕಿಯರ ವಿಭಾಗಕ್ಕೆ ಪ್ರತ್ಯೇಕ ಮ್ಯಾಟ್ ಅಂಕಣಗಳು ಸಿದ್ಧಗೊಳ್ಳುತ್ತಿದ್ದು, ಯಶಸ್ವಿ ಪಂದ್ಯಾಟ ಆಯೋಜನೆಯಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ಕುಂದಾಪುರದ ಉಪನ್ಯಾಸಕ ವೃಂದ ನಿರತವಾಗಿದೆ.


Comments

Popular posts from this blog

ಕುಂದಾಪುರದ ಸಂಪ್ರದಾಯಗಳ ತಿಳಿಸುವ ಕಲಾತ್ಮಕ ಕಿರುಚಿತ್ರ ''ಕ್ಯಾನಿಮುಡಿ''

ಜನ್ಸಾಲೆ ನಾಗಮಂಡಲೋತ್ಸವಕ್ಕೆ ಚಪ್ಪರ ಮುಹೂರ್ತ

ಸಿದ್ದಾಪುರದಲ್ಲಿ ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರ