ಶಾಲೆಗಳ ದಸರಾ ರಜೆಗೆ ಹೊಸ ಮಾರ್ಗಸೂಚಿ : ಎಷ್ಟು ದಿನ ರಜೆ ? ಇಲ್ಲಿದೆ ಸಂಪೂರ್ಣ ಮಾಹಿತಿ
Sept 21 2024 : 2024-25ನೇ ಶೈಕ್ಷಣಿಕ ಸಾಲಿನ ಕರ್ನಾಟಕ ರಾಜ್ಯದ ಖಾಸಗಿ, ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ನಾಡಹಬ್ಬ ದಸರಾಕ್ಕಾಗಿ ಕರುನಾಡು ಸಿದ್ದವಾಗುತ್ತಿದೆ. ಅರಮನೆ ನಗರಿ ಮೈಸೂರಲ್ಲಿ ದಸರಾಕ್ಕಾಗಿ ಸಿದ್ದತೆಗಳು ಜೋರಾಗಿವೆ. ಈ ನಡುವಲ್ಲೇ ಕರ್ನಾಟಕ ಸರಕಾರ ದಸರಾ ರಜೆಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ದಸರಾ ರಜೆಯ ಅವಧಿಯಲ್ಲಿ ಬದಲಾವಣೆಯನ್ನು ಮಾಡಿದೆ. ಕರ್ನಾಟಕದಲ್ಲಿ ದಸರಾ ರಜೆ ಯಾವ ದಿನಾಂಕದಿಂದ ಆರಂಭಗೊಂಡು ಎಲ್ಲಿಯ ವರೆಗೆ ಇರಲಿದೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.
2024-25ನೇ ಶೈಕ್ಷಣಿಕ ಸಾಲಿನ ಕರ್ನಾಟಕ ರಾಜ್ಯದ ಖಾಸಗಿ, ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯ ಪ್ರಕಾರ ಶಾಲಾ ಮಕ್ಕಳಿಗೆ ಅಕ್ಟೋಬರ್ 3 ರಿಂದ 20 ತನಕ ದಸರಾ ರಜೆ ಘೋಷಿಸಲಾಗಿದೆ. ರಾಜ್ಯದ ಎಲ್ಲಾ ಶಾಲೆಗಳಿಗೂ ಏಕರೂಪದ ಮಾರ್ಗಸೂಚಿ ಪ್ರಕಟವಾಗಿದೆ.
ಕಳೆದ ವರ್ಷಗಳಲ್ಲಿ ಕರ್ನಾಟಕದ ಕರಾವಳಿ ಭಾಗಕ್ಕೆ ನೀಡುವ ರಜೆಯಲ್ಲಿ ಮಾರ್ಪಾಡು ಮಾಡಲಾಗುತ್ತಿತ್ತು. ಕಳೆದ ಬಾರಿ ಬೆಂಗಳೂರು, ಮೈಸೂರು, ಮಂಗಳೂರಿನ ಶಾಲೆಗಳಿಗೆ ರಜೆಯಲ್ಲಿ ಬದಲಾವಣೆ ಮಾಡಲಾಗಿತ್ತು. ಆದರೆ ಈ ಬಾರಿ ಯಾವುದೇ ಮಾರ್ಪಾಡು ಮಾಡಿಲ್ಲ. ಹೀಗಾಗಿ ರಾಜ್ಯದಾದ್ಯಂತ ಏಕರೂಪದ ದಸರಾ ರಜೆ ಮಾರ್ಗಸೂಚಿ ಪ್ರಕಟಿಸಲಾಗಿದೆ.
ದಸರಾ ರಜೆಯು ಈ ಬಾರಿ ಅಕ್ಟೋಬರ್ 3 ರಿಂದ ಆರಂಭಗೊಂಡು 20ರ ವರೆಗೆ ಇರಲಿದೆ. ಒಟ್ಟು 17 ದಿನಗಳ ಕಾಲ ದಸರಾ ರಜೆ ಲಭ್ಯವಾಗಲಿದೆ. ರಾಜ್ಯದಾದ್ಯಂತ ಅಕ್ಟೋಬರ್ 21ರಿಂದ 2ನೇ ಅವಧಿಯ ಶೈಕ್ಷಣಿಕ ಚಟುವಟಿಕೆಯು ಆರಂಭಗೊಳ್ಳಲಿದೆ. ಎರಡನೇ ಅವಧಿಯ ಶೈಕ್ಷಣಿಕ ವರ್ಷವು 2025ರ ಏಪ್ರಿಲ್ 10 ರ ತನಕ ನಡೆಯಲಿದೆ.
#timeskundapra
#dasara2024
#dasaraholidays
Comments
Post a Comment