ಜೂನಿಯರ್ ಕಾಲೇಜು ಕುಂದಾಪುರದಲ್ಲಿ, ಜಿಲ್ಲಾ ಮಟ್ಟದ ಮ್ಯಾಟ್ ಕಬ್ಬಡಿ ಪಂದ್ಯಾಟ.

 #ಟೈಮ್ಸ್ ಕುಂದಾಪ್ರ 

 ಜಿಲ್ಲಾ ಮಟ್ಟದ ಮ್ಯಾಟ್ ಕಬ್ಬಡಿ ಪಂದ್ಯಾಟ:- ಬಾಲಕರ ವಿಭಾಗದಲ್ಲಿ ಕುಂದಾಪುರ ತಂಡ, ಬಾಲಕೀಯರ ವಿಭಾಗದಲ್ಲಿ ಉಡುಪಿಯ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ
 
2024-25ನೇ ಶೈಕ್ಷಣಿಕ ವರ್ಷದ ಪದವಿ ಪೂರ್ವ ವಿಭಾಗದ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ ಇಂದು(ಸೋಮವಾರ) ಸರಕಾರಿ ಪದವಿಪೂರ್ವ ಕಾಲೇಜು ಕುಂದಾಪುರದಲ್ಲಿ ದೀಪಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.
ಜಿಲ್ಲಾ ಮಟ್ಟದ ಮ್ಯಾಟ್ ಕಬ್ಬಡಿ ಪಂದ್ಯಾಟ


ಉಡುಪಿ ಜಿಲ್ಲಾ ಮಟ್ಟದ ಬಾಲಕರು ಮತ್ತು ಬಾಲಕಿಯರ ವಿಭಾಗದ ಒಟ್ಟು 14 ತಂಡಗಳು ಪಂದ್ಯಾಕೂಟದಲ್ಲಿ ಭಾಗವಹಿಸಿದ್ದು, ಬಾಲಕರ ವಿಭಾಗದಲ್ಲಿ ಜನತಾ ಇಂಡಿಪೆಂಡೆಂಟ್ ಕಾಲೇಜು ಹೆಮ್ಮಾಡಿ, ಸರಕಾರಿ ಪದವಿಪೂರ್ವ ಕಾಲೇಜು ಕುಂದಾಪುರದ ವಿದ್ಯಾರ್ಥಿಗಳನ್ನೊಳಗೊಂಡ ಕುಂದಾಪುರ ತಾಲೂಕಿನ ತಂಡ ವಿನ್ನರ್ಸ್ ಆಗಿ ಮೂಡಿಬಂದರೇ, 
ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನೊಳಗೊಂಡ ಬ್ರಹ್ಮಾವರ ತಾಲೂಕನ್ನು ಪ್ರತಿನಿಧಿಸಿದ ತಂಡ ರನ್ನರ್ಸ್‌ ಅಪ್ ಆಗಿ ಮೂಡಿಬಂತು. 
    ಇನ್ನು ಬಾಲಕೀಯರ ವಿಭಾಗದಲ್ಲಿ ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜು ಉಡುಪಿಯ ವಿದ್ಯಾರ್ಥಿನಿಯನ್ನೊಳಗೊಂಡ ಉಡುಪಿ ತಾಲೂಕನ್ನು ಪ್ರತಿನಿಧಿಸಿದ ತಂಡ ವಿನ್ನರ್ಸ್ ಆಗಿ ಮೂಡಿಬಂದರೇ, 
ಶ್ರೀ ವೆಂಕಟರಮಣ ಮಹಿಳಾ ಕಾಲೇಜು ಕಾರ್ಕಳದ ವಿದ್ಯಾರ್ಥಿನಿಯರನ್ನೊಳಗೊಂಡ ತಂಡ ರನ್ನರ್ಸ್ ಅಪ್ ಆಗಿ ಮೂಡಿಬಂತು.

ಬಾಲಕರ ವೈಯಕ್ತಿಕ ಪ್ರಶಸ್ತಿಯ ವಿಭಾಗದಲ್ಲಿ ಕುಂದಾಪುರ ತಾಲೂಕನ್ನು ಪ್ರತಿನಿಧಿಸಿದ ಸರಕಾರಿ ಪದವಿಪೂರ್ವ ಕಾಲೇಜು ಕುಂದಾಪುರದ ವಿದ್ಯಾರ್ಥಿ ಸುಜಯ್ ದೇವಾಡಿಗ ಬೆಸ್ಟ್ ರೈಡರ್ ಪ್ರಶಸ್ತಿ, ಬ್ರಹ್ಮಾವರ ತಾಲೂಕನ್ನು ಪ್ರತಿನಿಧಿಸಿದ ವಿವೇಕ ಪದವಿ ಪೂರ್ವ ಕಾಲೇಜಿನ ಆಕಾಶ್ ಬೆಸ್ಟ್ ಕ್ಯಾಚರ್ ಪ್ರಶಸ್ತಿ ಹಾಗೂ ಕುಂದಾಪುರ ತಾಲೂಕನ್ನು ಪ್ರತಿನಿಧಿಸಿದ ಜನತಾ ಇಂಡಿಪೆಂಡೆಂಟ್ ಪದವಿ ಪೂರ್ವ ಕಾಲೇಜು ಹೆಮ್ಮಾಡಿಯ ವಿಶೇಷ ಬೆಸ್ಟ್ ಆಲ್ ರೌಂಡ‌ರ್ ಪ್ರಶಸ್ತಿಯನ್ನು ಪಡೆದುಕೊಂಡರು.

ಬಾಲಕೀಯರ ವೈಯಕ್ತಿಕ ಪ್ರಶಸ್ತಿಯ ವಿಭಾಗದಲ್ಲಿ ಉಡುಪಿ ತಾಲೂಕನ್ನು ಪ್ರತಿನಿಧಿಸಿದ ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜು ಉಡುಪಿಯ ನಿಶಾ ಬೆಸ್ಟ್ ರೈಡ‌ರ್ ಪ್ರಶಸ್ತಿ, ಕಾರ್ಕಳ ತಾಲೂಕನ್ನು ಪ್ರತಿನಿಧಿಸಿದ ಶ್ರೀ ವೆಂಕಟರಮಣ ಮಹಿಳಾ ಕಾಲೇಜು ಕಾರ್ಕಳದ ಮಂಜುಳಾ ಬೆಸ್ಟ್ ಕ್ಯಾಚರ್ ಪ್ರಶಸ್ತಿ ಹಾಗೂ ಉಡುಪಿ ತಾಲೂಕನ್ನು ಪ್ರತಿನಿಧಿಸಿದ ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜು ಉಡುಪಿಯ ಮನಿಷಾ ಬೆಸ್ಟ್ ಆಲ್ ರೌಂಡ‌ರ್ ಪ್ರಶಸ್ತಿಯನ್ನು ಪಡೆದುಕೊಂಡರು.

ಬಾಲಕರ ವಿಭಾಗದಲ್ಲಿ ಕುಂದಾಪುರ ತಾಲೂಕನ್ನು ಪ್ರತಿನಿಧಿಸಿದ ತಂಡ ಹಾಗೂ ಬಾಲಕೀಯ ವಿಭಾಗದಲ್ಲಿ ಉಡುಪಿ ತಾಲೂಕನ್ನು ಪ್ರತಿನಿಧಿಸಿದ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡವು.


ಪ್ರಶಸ್ತಿ ಸಮಾರಂಭ ಕಾರ್ಯಕ್ರಮದಲ್ಲಿ ಸ.ಪ.ಪೂ ಕಾಲೇಜು ಕುಂದಾಪುರದ ಪ್ರಾಂಶುಪಾಲರಾದ ರಾಮಕೃಷ್ಣ ಬಿ.ಜಿ., ಉಪ ಪ್ರಾಂಶುಪಾಲ ಕಿರಣ್ ಹೆಗ್ಡೆ ಜೀವನ್ ಕುಮಾರ್ ಶೆಟ್ಟಿ ಸತೀಶ್ ಹೆಗ್ಡೆ ಕಬ್ಬಡಿ ಪಂದ್ಯಾಟದ ವೀಕ್ಷಕರಾದ ಮಂಜುನಾಥ ಜೋಗಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಅರುಣ್ ಕುಮಾರ್ ಶೆಟ್ಟಿ ತಾಲೂಕು ಸಂಯೋಜಕ ಶ್ರೀರಾಮ ಶೆಟ್ಟಿ ಕ್ರೀಡಾ ಸಂಚಾಲಕರಾದ ಉದಯ್ ಶೆಟ್ಟಿ ಕಾಳಾವರ, ಪೂರ್ಣಿಮಾ ಪಿ. ನಾಯಕ್, ದೈಹಿಕ ಶಿಕ್ಷಣ ಶಿಕ್ಷಕರಾದ ಗೋಪಾಲ ಶೆಟ್ಟಿ ಅವರನ್ನೊಳಗೊಂಡು ಕಾಲೇಜಿನ ಉಪನ್ಯಾಸಕರು, ಪಂದ್ಯಾಟದ ತೀರ್ಪುಗಾರರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Comments

Popular posts from this blog

ಕುಂದಾಪುರದ ಸಂಪ್ರದಾಯಗಳ ತಿಳಿಸುವ ಕಲಾತ್ಮಕ ಕಿರುಚಿತ್ರ ''ಕ್ಯಾನಿಮುಡಿ''

ಜನ್ಸಾಲೆ ನಾಗಮಂಡಲೋತ್ಸವಕ್ಕೆ ಚಪ್ಪರ ಮುಹೂರ್ತ

ಸಿದ್ದಾಪುರದಲ್ಲಿ ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರ