ಉಡುಪಿ ಜಿಲ್ಲಾ ಮಟ್ಟದ ಸರಕಾರಿ ಶಾಲೆಗಳ ಅಭಿವೃದ್ಧಿ ಹರಿಕಾರ ಪ್ರಶಸ್ತಿಗೆ ಆನಂದ್ ಸಿ. ಕುಂದರ್ ಆಯ್ಕೆ
ಟೈಮ್ಸ್ ಕುಂದಾಪ್ರ -
ಎಸ್.ಡಿ.ಎಂ.ಸಿ. ಸಮನ್ವಯ ಕೇಂದ್ರ ವೇದಿಕೆ ರಿ. ಉಡುಪಿ ಜಿಲ್ಲೆ. 2024/25 ನೆ ಸಾಲಿನ ಉಡುಪಿ ಜಿಲ್ಲಾಮಟ್ಟದ ಸರಕಾರಿ ಶಾಲೆಗಳ ಅಭಿವೃದ್ಧಿ ಹರಿಕಾರ ಪ್ರಶಸ್ತಿಗೆ ಆನಂದ್ ಸಿ. ಕುಂದರ್ ಅವರು ಆಯ್ಕೆಯಾಗಿರುತ್ತಾರೆ.
ಆನಂದ್ ಸಿ ಕುಂದರ್ ಅವರು ಜಿಲ್ಲೆಯ ಬಹುತೇಕ ಶಾಲೆಗಳಿಗೆ ಅಗತ್ಯತೆಯನ್ನು ಗಮನಿಸಿ ಅತೀ ದೊಡ್ಡ ಮಟ್ಟದಲ್ಲಿ ಸಹಾಯ ಸಹಕಾರ ನೀಡಿದವರು. ಪ್ರತಿ ವರ್ಷ ಗೀತಾನಂದ ಟ್ರಸ್ಟ್ ಮೂಲಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ನೋಟ್ ಬುಕ್ ವಿತರಣೆ ಮಾಡುತ್ತಿದ್ದರು. ಸ್ಕೂಲ್ ಮತ್ತು ಆಯುರ್ವೇದ ಮೆಡಿಕಲ್ ಕಾಲೇಜು ಸ್ಥಾಪಿಸಿ ಗ್ರಾಮೀಣ ಭಾಗದ ಮಕ್ಕಳು ಕೂಡ ವೈದ್ಯರಾಗುವ ಅವಕಾಶ ಮಾಡಿಕೊಟ್ಟಂತಹ ಮಹಾನ್ ನಾಯಕ ಆನಂದ್ ಸಿ ಕುಂದರ್ ಅವರು.
Comments
Post a Comment