ಕುಂದಾಪುರದಲ್ಲಿ ದ್ವಿಚಕ್ರ ವಾಹನಗಳೆರಡು ಮುಖಮುಖಿ ಡಿಕ್ಕಿ, ಸವಾರ ಮೃತ್ಯು!

ಟೈಮ್ಸ್ ಕುಂದಾಪ್ರ 


ಕುಂದಾಪುರ: ದ್ವಿಚಕ್ರ ವಾಹನಗಳೆರಡು ಮುಖಮುಖಿ ಡಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ನಗರ ಸಮೀಪದ ಹಂಗಳೂರಿನ ನಗು ಪ್ಯಾಲೇಸ್ ಎದುರುಗಡೆಯ ಸರ್ವೀಸ್ ರಸ್ತೆಯಲ್ಲಿ ಸೆ. 28 ರಂದು ಶನಿವಾರ ರಾತ್ರಿ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರ ಕುಂದಾಪುರದ ಬರೆಕಟ್ಟುವಿನ ಬಾಳೆಹಿತ್ಲು ನಿವಾಸಿಯಾದ ಪೈಂಟರ್ ವೆಂಕಟೇಶ್ ಇವರ ಪುತ್ರ ಶಶಾಂಕ್ ಮೊಗವೀರ (22) ಎಂದು ಗುರುತಿಸಲಾಗಿದೆ.

ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶಶಾಂಕ ಮೊಗವೀರ ರಾತ್ರಿ 11.00 ರ ವೇಳೆಗೆ ರಿಲಯನ್ಸ್ ಪೆಟ್ರೋಲ್ ಬಂಕಿನಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಬೈಕ್ ನಲ್ಲಿ ಮನೆಗೆ ಹಿಂತಿರುಗುವ ವೇಳೆ ಎದುರಿನಿಂದ ಬಂದ ಬುಲೆಟ್ ನೇರ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಗಂಭೀರ ಗಾಯಗೊಂಡ ಬೈಕ್ ಸವಾರ ಶಶಾಂಕ್ ಮೊಗವೀರನನ್ನು ತಕ್ಷಣ ಮಣಿಪಾಲದ ಕೆಏಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ದಾರಿ ಮದ್ಯೆ ಅವರು ಕೊನೆರುಸಿರೆಳೆದರು ಎಂದು ತಿಳಿದು ಬಂದಿದೆ.

ಬಲೆಟ್ ಸವಾರ ಮತ್ತು ಹಿಂದೆ ಕುಳಿತಿದ್ದ ಮಹಿಳೆಯೂ ಕೂಡ ಗಂಭೀರವಾಗಿ ಗಾಯಗೊಂಡಿದ್ದು ಇಬ್ಬರನ್ನು ಮಣಿಪಾಲದ ಕೆಎಂಸಿಗೆ ದಾಖಲಿಸಲಾಗಿದೆ

ಕುಂದಾಪುರ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Popular posts from this blog

ಕುಂದಾಪುರದ ಸಂಪ್ರದಾಯಗಳ ತಿಳಿಸುವ ಕಲಾತ್ಮಕ ಕಿರುಚಿತ್ರ ''ಕ್ಯಾನಿಮುಡಿ''

ಜನ್ಸಾಲೆ ನಾಗಮಂಡಲೋತ್ಸವಕ್ಕೆ ಚಪ್ಪರ ಮುಹೂರ್ತ

ಸಿದ್ದಾಪುರದಲ್ಲಿ ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರ