ಜನ್ಸಾಲೆಯ ನಾಗಮಂಡಲೋತ್ಸವ ಪೂರ್ವಭಾವಿ ಸಭೆ

#ಟೈಮ್ಸ್ ಕುಂದಾಪ್ರ
 
   ಸಿದ್ದಾಪುರ ಗ್ರಾಮದ ಜನ್ಸಾಲೆ ಶಕ್ತಿ ಸ್ಥಳ ಶ್ರೀ ಸರ್ವಾರ್ಥ ಸಾಧಿಕೆ ಅಮ್ಮನವರ ದೇವಸ್ಥಾನದ ಕುಟುಂಬಸ್ಥರ ನಾಗ ಸನ್ನಿದಿಯಲ್ಲಿ ಫೆಬ್ರವರಿ 04, 2025 ರಂದು ನಡೆಯುವ ಚತುಃಪವಿತ್ರ ನಾಗಮಂಡ ಲೋತ್ಸದ ಊರ ಭಕ್ತಾದಿಗಳ ಪೂರ್ವ ಸಿದ್ದತಾ ಸಭೆ ನಡೆಯಿತು.

ಸಂಪಿಗೇಡಿ ಸಂಜೀವ ಶೆಟ್ಟಿ ಅವರು ಮಾತನಾಡಿ, ನಾಗಮಂಡಲೋತ್ಸವದ ಪೂರ್ವ ಸಿದ್ಧತೆಗಾಗಿ ಸಮಿತಿ ರಚನೆ, ಇತ್ಯಾದಿ ಸಕಲ ಸಿದ್ದತೆಗಳ ಬಗ್ಗೆ ಮಾತನಾಡಿದರು.

ಶ್ರೀ ಸರ್ವಾರ್ಥ ಸಾದಿಕೆ ದೇವಳದ ಆಡಳಿತ ಮುಖ್ಯಸ್ಥರಾದ ಲಕ್ಷ್ಮಣ ಕುಲಾಲ್ ಮಾತನಾಡಿ, ಊರ ದೇವರ ಸಾನಿಧ್ಯದಲ್ಲಿ ನಡೆಯುವ ಹರಕೆಯ ನಾಗಮಂಡಲೋತ್ಸವ ಯಶಸ್ಸಿಗೆ ಎಲ್ಲರ ಸೇವೆಯ ಅಗತ್ಯವಿದ್ದು, ದೇವತಾ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದಿದ್ದಾರೆ.

ಸಭೆಯಲ್ಲಿ ಹಿರಿಯರಾದ ಕನಕ ಕುಲಾಲ್ತಿ, ಮಧುಸೂದನ್ ಕಾಮತ್, ನರಸಿಂಹ ಕುಲಾಲ್, ಶ್ರೀಕಾಂತ್ ನಾಯಕ್ ಸಿದ್ದಾಪುರ, ಚಂದ್ರ ಶೆಟ್ಟಿ ಕಡ್ರಿ, ರವಿ ಕುಲಾಲ್ ಶಂಕರನಾರಾಯಣ, ವಾಸುದೇವ ಪೈ, ಮಾಧವ ಕಾಮತ್, ಮಂಜುನಾಥ್ ಕುಲಾಲ್ ಜನ್ಸಾಲೆ, ಮೇಲ್ವಿಚಾರಕ ಸಂದೀಪ್, ಚಂದ್ರ ಭಟ್ ಯಡಮೊಗೆ, ಕೆಇಬಿ ಕೃಷ್ಣ, ಪ್ರದೀಪ್ ಭಂಡಾರಿ, ನಾಗರಾಜ ಕುಲಾಲ್ ಹಾಗೂ ಊರ ಪ್ರಮುಖರು ಉಪಸ್ಥಿತರಿದ್ದರು.
 ಭಕ್ತಾದಿಗಳನ್ನು ಲಕ್ಷ್ಮಣ ಕುಲಾಲ್ ಸ್ವಾಗತಿಸಿದರು. ಶೇಖರ್ ಕುಲಾಲ್ ನಿರೂಪಿಸಿದರು. ರಾಘವೇಂದ್ರ ಆಚಾರ್ಯ ಅವರು ವಂದಿಸಿದರು.
 

Comments

Popular posts from this blog

ಕುಂದಾಪುರದ ಸಂಪ್ರದಾಯಗಳ ತಿಳಿಸುವ ಕಲಾತ್ಮಕ ಕಿರುಚಿತ್ರ ''ಕ್ಯಾನಿಮುಡಿ''

ಜನ್ಸಾಲೆ ನಾಗಮಂಡಲೋತ್ಸವಕ್ಕೆ ಚಪ್ಪರ ಮುಹೂರ್ತ

ಸಿದ್ದಾಪುರದಲ್ಲಿ ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರ