ವತ್ತಿನಕಟ್ಟೆ : ಮಹಾಸತಿ ದೇವಸ್ಥಾನದ ನಾಗ ಸನ್ನಿಧಿಯಲ್ಲಿ ಸುಬ್ರಹ್ಮಣ್ಯ ಷಷ್ಠಿ ಪೂಜೆ

#ಟೈಮ್ಸ್ ಕುಂದಾಪ್ರ 
ಬೈಂದೂರು : ಇಲ್ಲಿನ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ಸನ್ನಿಧಿಯಲ್ಲಿ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ನಾಗ ಬನದಲ್ಲಿ ಸುಬ್ರಹ್ಮಣ್ಯ ಹೋಮ, ನಾಗ ದೇವರ ವಿಶೇಷ ಅಲಂಕಾರ ಪೂಜೆ, ಹಾಗೂ ಅನ್ನ ಸಂತರ್ಪಣೆ ನಡೆಯಿತು.

ದೇವಸ್ಥಾನದ ಪ್ರಧಾನ ಅರ್ಚಕರಾದ ಬಿ. ಕೃಷ್ಣಮೂರ್ತಿ ನಾವಡ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು. 

ದೇವಳದ ಸೇವಾ ಸಮಿತಿ  ಅಧ್ಯಕ್ಷ ನಾಗರಾಜ್ ಶೆಟ್ಟಿ, ಕಾರ್ಯದರ್ಶಿ ಎಸ್. ಶಿವರಾಮ ಪೂಜಾರಿ, ಸದಸ್ಯರಾದ ಶಂಕರ ಮೊಗವೀರ, ನಾಗರಾಜ ಗಾಣಿಗ, ಮಂಜುನಾಥ ಆಚಾರ್ಯ, ಸತ್ಯಪ್ರಸನ್ನ, ಪಾತ್ರಿಗಳಾದ ಅಣ್ಣಪ್ಪ ಪೂಜಾರಿ ಹಾಗೂ ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.

ವರದಿ : ಎಚ್ ಸುಶಾಂತ್ ಆಚಾರ್ ಬೈಂದೂರು

Comments

Popular posts from this blog

ಕುಂದಾಪುರದ ಸಂಪ್ರದಾಯಗಳ ತಿಳಿಸುವ ಕಲಾತ್ಮಕ ಕಿರುಚಿತ್ರ ''ಕ್ಯಾನಿಮುಡಿ''

ಜನ್ಸಾಲೆ ನಾಗಮಂಡಲೋತ್ಸವಕ್ಕೆ ಚಪ್ಪರ ಮುಹೂರ್ತ

ಸಿದ್ದಾಪುರದಲ್ಲಿ ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರ